PM Kisan: ಮುಂದಿನ ಕಂತು ಯಾವಾಗ ಬರಲಿದೆ! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ

ರೈತರಿಗೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಎಂಟನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪಿಎಂ ಕಿಸಾನ್ ಯೋಜನೆಯ ಏಳನೇ ಕಂತು 20 ಡಿಸೆಂಬರ್ 2020 ರಂದು ಬಿಡುಗಡೆಯಾಯಿತು.  ಇದರ 8 ನೇ ಕಂತನ್ನು ಮಾರ್ಚ್ ಅಂತ್ಯದಲ್ಲಿ ಸರ್ಕಾರ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. 

Written by - Yashaswini V | Last Updated : Feb 19, 2021, 12:45 PM IST
  • ಪಿಎಂ ಕಿಸಾನ್ ಯೋಜನೆಯ ಏಳನೇ ಕಂತು 20 ಡಿಸೆಂಬರ್ 2020 ರಂದು ಬಿಡುಗಡೆಯಾಯಿತು
  • ಪಿಎಂ ಕಿಸಾನ್ ಯೋಜನೆಯ 8 ನೇ ಕಂತನ್ನು ಮಾರ್ಚ್ ಅಂತ್ಯದಲ್ಲಿ ಸರ್ಕಾರ ಬಿಡುಗಡೆ ಮಾಡಬಹುದು
  • ಪಿಎಂ ಕಿಸಾನ್‌ನಲ್ಲಿ ನಿಮ್ಮ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ
PM Kisan: ಮುಂದಿನ ಕಂತು ಯಾವಾಗ ಬರಲಿದೆ! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಹೀಗೆ ಪರಿಶೀಲಿಸಿ title=
PM Kisan Samman Nidhi Yojana

PM Kisan: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ವರ್ಷಕ್ಕೆ 6000 ರೂಪಾಯಿಗಳನ್ನು ನೇರವಾಗಿ ಅಗತ್ಯವಿರುವ ರೈತರಿಗೆ ಅವರ ಖಾತೆಗಳಲ್ಲಿ ವರ್ಗಾಯಿಸಲಾಗುತ್ತದೆ.  ಪಿಎಂ ಕಿಸಾನ್ ಯೋಜನೆಯ ಏಳನೇ ಕಂತು 20 ಡಿಸೆಂಬರ್ 2020 ರಂದು ಬಿಡುಗಡೆಯಾಯಿತು.  ಇದರ 8 ನೇ ಕಂತನ್ನು ಮಾರ್ಚ್ ಅಂತ್ಯದಲ್ಲಿ ಸರ್ಕಾರ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. 

ರೈತರು 3 ಕಂತುಗಳಲ್ಲಿ ಮೊತ್ತವನ್ನು ಪಡೆಯುತ್ತಾರೆ :
ಈ ಮೊತ್ತವನ್ನು ವರ್ಷದಲ್ಲಿ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ರೈತರು (Farmers) ಈ ಮೊತ್ತವನ್ನು 2000-2000 ರೂಪಾಯಿಗಳ ಮೂರು ಕಂತುಗಳಲ್ಲಿ ಪಡೆಯುತ್ತಾರೆ. ಅಂದರೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಮೊದಲ ಕಂತನ್ನು ಏಪ್ರಿಲ್-ಜುಲೈನಲ್ಲಿ ನೀಡಲಾಗುತ್ತದೆ. ಎರಡನೇ ಕಂತು ಆಗಸ್ಟ್-ನವೆಂಬರ್ ಅವಧಿಯಲ್ಲಿ ನೀಡಲಾಗುತ್ತದೆ ಮತ್ತು ಮೂರನೇ ಕಂತನ್ನು ಡಿಸೆಂಬರ್-ಮಾರ್ಚ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ - PM Kisan Sammaan Nidhi: ತಲುಪಬಾರದ ಜನರ ಖಾತೆ ತಲುಪಿದ 1364 ಕೋಟಿ ರೂ. ಅರ್ಹ ರೈತರ ಹಣ

ಪಿಎಂ ಕಿಸಾನ್‌ನಲ್ಲಿ ನಿಮ್ಮ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ :
ನೀವೂ ಸಹ ಈ ಯೋಜನೆಯ ಫಲಾನುಭವಿಗಳಾಗಿದ್ದರೆ ಮತ್ತು 8 ನೇ ಕಂತಿನಲ್ಲಿ ಬಿಡುಗಡೆ ಆಗಲಿರುವ ಮೊತ್ತವನ್ನು ನೀವು ಪಡೆಯುತ್ತೀರೋ ಇಲ್ಲವೋ ಎಂದು ತಿಳಿಯಲು ನೀವು ಬಯಸಿದರೆ, ನೀವು ಸುಲಭವಾಗಿ ಸರ್ಕಾರದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

1. ಮೊದಲು ಪಿಎಂ ಕಿಸಾನ್ (PM Kisan) ಅವರ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://pmkisan.gov.in/.
2. ಇಲ್ಲಿ ನೀವು ಬಲಭಾಗದಲ್ಲಿ 'ಫಾರ್ಮರ್ಸ್ ಕಾರ್ನರ್' ('Farmers Corner') ಆಯ್ಕೆಯನ್ನು ಕಾಣಬಹುದು.
3. ಇಲ್ಲಿ 'ಫಲಾನುಭವಿ ಸ್ಥಿತಿ' ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ, ಹೊಸ ಪುಟ ತೆರೆಯುತ್ತದೆ.
4. ಹೊಸ ಪುಟದಲ್ಲಿ, ಆಧಾರ್ (Aadhaar) ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯಿಂದ ಆಯ್ಕೆಗಳಲ್ಲಿ ಒಂದನ್ನು ಆರಿಸಿ. ಈ ಮೂರು ಸಂಖ್ಯೆಗಳ ಮೂಲಕ ನಿಮ್ಮ ಖಾತೆಗೆ ಹಣ ಬರುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.
5. ನೀವು ಆಯ್ಕೆ ಮಾಡಿದ ಆಯ್ಕೆಯ ಸಂಖ್ಯೆಯನ್ನು ಭರ್ತಿ ಮಾಡಿ. ಇದರ ನಂತರ, 'ಡೇಟಾ ಪಡೆಯಿರಿ' ಕ್ಲಿಕ್ ಮಾಡಿ.
6. ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ, ನೀವು ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತೀರಿ. ನಿಮ್ಮ ಖಾತೆಗೆ ಕಂತು ಬಂದಾಗ ಮತ್ತು ಯಾವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದೂ ಸಹ ಇದರಲ್ಲಿ ತಿಳಿಯಲಿದೆ.
7. ಈ ಸ್ಥಳದಲ್ಲಿ ಎಂಟನೇ ಕಂತಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ನೀವು ಪಡೆಯುತ್ತೀರಿ.
8. ಎಫ್‌ಟಿಒ ಉತ್ಪತ್ತಿಯಾಗಿದೆ ಮತ್ತು ಪಾವತಿ ದೃಢೀಕರಣ ಬಾಕಿ ಉಳಿದಿದೆ ಎಂದು ನೀವು ನೋಡಿದರೆ, ಇದರರ್ಥ ನಿಧಿ ವರ್ಗಾವಣೆಯ ಪ್ರಕ್ರಿಯೆಯು ಪ್ರಾರಂಭವಾಗಿದೆ. ಈ ಕಂತು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಬರುತ್ತದೆ.

ಇದನ್ನೂ ಓದಿ - PM Kisan nidhi status: ನಿಮ್ಮ ಖಾತೆಗೆ ಹಣ ಇನ್ನೂ ಬಂದಿಲ್ಲವೇ, ತಕ್ಷಣ ಹೀಗೆ ಮಾಡಿ

ಮೊಬೈಲ್ ಅಪ್ಲಿಕೇಶನ್ ಮೂಲಕವೂ ಪರಿಶೀಲಿಸಿ :
ಪಿಎಂ ಕಿಸಾನ್‌ಗಾಗಿ ಮೊಬೈಲ್ ಆ್ಯಪ್ ಕೂಡ ಇದೆ. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಅದನ್ನು ಡೌನ್‌ಲೋಡ್ ಮಾಡಿ, ನಿಮ್ಮ ಸ್ಟೇಟಸ್ ಬಗ್ಗೆ ನೀವು ಇದರಲ್ಲಿ ನವೀಕರಣ ಪಡೆಯುತ್ತೀರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News